Pages

Sunday, July 18, 2021

Preethiya Swamige Nuthana Aalaya Song Lyrics / ಪ್ರೀತಿಯ ಸ್ವಾಮಿಗೆ ನೂತನ ಆಲಯ ಸಾಹಿತ್ಯ

Lyrics: Fr. Chasara 
Music: Sadhu Kokila and Praveen Dutt steepan
Album: Spandana
Song: Preethiya Swamige Nuthana Aalaya 
YouTube link : https://youtu.be/73h3EgN1rSo

ಓಂ ಘಂಟಾನಾದಂ ಝೇಂಕಾರಸ್ವರಂ ಸಪ್ತಸ್ವರ ದೇವನಾದಂ 

ಓಂ ಸೂರ್ಯೋದಯಂ ಸುಪ್ರಭಾತ ಪೂಜಾ ಸಮಯಂ

ಸುಮಧುರಗಾನಂ ಓಂ ದೇವಸುತನ ಸ್ನೇಹಪರ ಪೂಜಿಪ ಸಮಯಂ 

ಅಭಿಷಕ್ತಂ ಅನಂತಂ ಓಂ ಶಾಂತಿ ಶಾಂತಿ ಶಾಂತಿಃ ...

ಪ್ರೀತಿಯ ಸ್ವಾಮಿಗೆ ನೂತನ ಆಲಯ || ಹೃದಯವ ಅರಳಿಸಿ ಬೆಳೆಸಿದ ದೇಗುಲ 

ಮಗಮ ದಮದ ನಿದನಿ ಸನಿಸ ಸಮಗ ನಿಗಸ ಗಸನಿ ದಮದನಿಸ

1.   ಸೂರ್ಯನ ಉದಯದಿ ಮನವನು ಬೆಳಗಿ || ಭಕ್ತಿಯ ಜ್ಯೋತಿಯಂ ಹೃದಯದಿ ಉರಿಸಿ 

      ಪ್ರೀತಿಯ ಆರತಿ ಬೆಳಗುತ ನಿನಗೆ ಶಿರಬಾಗಿ ಸ್ತುತಿ ಹಾಡಿ ನಿನ್ನೆಡೆಗೆ ಬಂದೆ 

      ಸತ್ಯರೂಪನ ಸತ್ಯವಾಕ್ಯದ ಸತ್ಯ ಮಾರ್ಗದಿ ನಡೆದು 

      ಸತ್ಯರೂಪವಂ ಸತ್ಯದರ್ಶನಂ ನಿತ್ಯ ಸತ್ಯವಂ ಬೆಳಗಿ 

      ಸತ್ಯ ಜ್ಯೋತಿಯಂ ಸತ್ಯ ಪ್ರೀತಿಯಂ ಸರ್ವ ಜನತೆಗೆ ಸಾರಿ || ಓಂ ಸತ್ಯ ನಿತ್ಯ ಶಾಂತಿಃ

2.   ದಿನವಿಡಿ ಶ್ರಮದಲಿ ನಿರುತವು ದುಡಿದು ಆತ್ಮದ ತೃಪ್ತಿಯಂ ಸತತವು ಪಡೆದು 

      ನ್ಯಾಯದ ನೀತಿಯ ಧ್ವಜವನ್ನು ಹಿಡಿದು ಕ್ರಿಸ್ತಾ ನಿನ್ನ ನೀತಿಯ ಸಾರುತ ಬಂದೆ 

      ನ್ಯಾಯ ನೀತಿಯ ಎತ್ತಿ ಹಿಡಿಯಲು ಆತ್ಮ ಶಕ್ತಿಯ ನೀಡು 

      ನ್ಯಾಯಕ್ಕಾಗಿ ನಾ ಪ್ರಾಣ ನೀಡಲು ನಿನ್ನ ಕರುಣೆಯ ತೋರು 

      ನ್ಯಾಯವೇ ನನ್ನ ದೇವರೆಂದು ನಾ ನ್ಯಾಯಕ್ಕಾಗಿಯೇ ಮಡಿವೆ || ಓಂ ನ್ಯಾಯ ನೀತಿ ಶಾಂತಿಃ


No comments:

Post a Comment

Jeeva Baradagide Prabhuve lyrics / ಜೀವ ಬರಡಾಗಿದೇ ಪ್ರಭುವೇ

   Lyrics:                     Fr Chasara Music:                   Sadhu kokila and Praveen Dutt Steepan Album:                   Aa thayi m...