Lyrics: Fr Chasara
Music: Sadhu kokila and Praveen Dutt SteepanAlbum: Aa thayi madilu
Song: Jeeva Baradagide prabhuve
YouTube link : https://youtu.be/sfGmsfOBb7g
ಜೀವ ಬರಡಾಗಿದೇ ಪ್ರಭುವೇ ನೀನು ಇಲ್ಲಿಲ್ಲದೆ
ಮನೆಯು ಬರಿದಾಗಿದೆ ಒಡೆಯಾ ನಿನ್ನ ಇರುವಿಲ್ಲದೆ ಮನದ ಮರೀಚಿಕೆ ಸುಖದ ಬರಿಕಲ್ಪನೆ ನೀನೆ ಸುಖವು ಕಾರುಣ್ಯದ ಕಡಲು, ನಿನ್ನ ಧ್ಯಾನ ತೃಪ್ತಿಯ ತಾಣವು 1. ಕಣ್ಣಲ್ಲಿ ಮಿಂಚಿದ ಅಳಲು ಎದೆಯಲಿ ಹನಿಯುತಿದೆ ಬೆಳಕಲ್ಲಿ ಅರಳಿದ ನಗುವು ಸಂಜೆಗೆ ಸೊರಗುತಿದೆ ಇವು ಕ್ಷಣಮಾತ್ರ ಭಾವಗಳೇ, ಇಲ್ಲ ನಿರಂತರ ಕಾಡುವುದೇ ಹೇಳು ಪ್ರಭು ಹೇಳು, ನಿಲ್ಲು ಜೊತೆ ನಿಲ್ಲು
ಹಗುರಾಗಲಿ ಮನಸ್ಸು, ಸ್ಥಿರವಾಗಲಿ ಬದುಕು 2. ಬದುಕಿನ ಹುಸಿಯನ್ನು ತೋರೋ ಜ್ಞಾನದ ಬಲದಿಂದಲೇ ನಶಿಸುವ ಭೋಗವ ತಿಳಿಸೋ ಆಧ್ಯಾತ್ಮ ಹಸಿವಿಂದಲೇ ನನ್ನ ಅನುಭವ ಹೊಸತಾಗಲಿ, ನಿನ್ನ ಅನುಗ್ರಹ ಕೃಪೆಯಿಂದಲಿ ನೀನೆ ಹೊಸ ಬದುಕು ಅಳಿಸೊ ಹಳೆ ಭ್ರಮೆಯ ನಿನ್ನಲ್ಲೇ ಮನಸೋಲುತ, ಹೊಸದಾಗಲಿ ಈ ಬದುಕು
No comments:
Post a Comment